Bigg Boss Kannada 5: Week 12: Caller of the week questions Chandan Shetty about Shruti Prakash. Chandan Shetty flirts with Shruti Prakash.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹೊಸ ಲವ್ ಸ್ಟೋರಿಗೆ ನಾಂದಿ ಹಾಡಿದ್ದು ಚಂದನ್ ಶೆಟ್ಟಿ. ಗಾಯಕಿ ಹಾಗೂ ನಟಿ ಶ್ರುತಿ ಪ್ರಕಾಶ್ ಮೇಲೆ ನನಗೆ ಕ್ರಶ್ ಆಗಿದೆ ಎಂದು ಎಲ್ಲರ ಮುಂದೆ ಚಂದನ್ ಶೆಟ್ಟಿ ಒಪ್ಪಿಕೊಂಡಿದ್ದರು.ಶ್ರುತಿ ಪ್ರಕಾಶ್ ಗಾಗಿ ''ಮುಚ್ಚಿಡಲಾರೆ...'' ಹಾಡನ್ನೂ ಸಂಯೋಜಿಸಿದ್ದರು ಚಂದನ್ ಶೆಟ್ಟಿ. ಅಲ್ಲಿಗೆ, ಚಂದನ್ ಶೆಟ್ಟಿ 'ಹೃದಯದರಸಿ' ಆಗಿದ್ದಾರೆ ಶ್ರುತಿ ಪ್ರಕಾಶ್ ಅಂತ ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ, ''ಶ್ರುತಿ ಪ್ರಕಾಶ್ ಜೊತೆ ನಾನು ಮಾಡುತ್ತಿರುವುದೆಲ್ಲ ಬರೀ ಡವ್'' ಎಂದು ಚಂದನ್ ಶೆಟ್ಟಿ ಘೋಷಿಸಿದರು. ಹಾಗಾದ್ರೆ, ಯಾವುದು ಸತ್ಯ.? ಯಾವುದು ಸುಳ್ಳು.?ಈ ಅನುಮಾನ ವೀಕ್ಷಕರಿಗೂ ಬಂದ ಕಾರಣ, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿಗೆ ಕಾಲರ್ ಆಫ್ ದಿ ವೀಕ್ ಪ್ರಶ್ನೆ ಕೇಳಿದರು.''ಸುದೀಪ್ ಮುಂದೆ ಶ್ರುತಿ ಮೇಲೆ ಫೀಲಿಂಗ್ಸ್ ಇದೆ ಅಂತ ಹೇಳ್ತೀರಾ. ಆದ್ರೆ, ರಿಯಾಝ್ ಜೊತೆ ಮಾತನಾಡುವಾಗ ಬರೀ ಡವ್ ಅಂದ್ರಿ. ಹಾಗಾದ್ರೆ, ಯಾವುದು ಸತ್ಯ.? ಇದು ಗೇಮ್ ಪ್ಲಾನಾ.?'' ಎಂದು ಚಂದನ್ ಶೆಟ್ಟಿಗೆ ಕಾಲರ್ ಆಫ್ ದಿ ವೀಕ್ ಪ್ರಶ್ನಿಸಿದರು.